ಸಮುದ್ರ ಶಾಸನದಡಿಯಲ್ಲಿ, ಒಂದು ಮೀಸಲು ಆರ್ಥಿಕ ವಲಯ (ಇಇಜಡ್ ) ವು ಒಂದು ಸಮುದ್ರ ವಲಯವಾಗಿದೆ, ಅದು ಸಮುದ್ರದ ಸಂಪನ್ಮೂಲಗಳ ಪರಿಶೋಧನೆ ಮತ್ತು ಬಳಕೆಯ ಮೇಲೆ ವಿಶಿಷ್ಟ ಹಕ್ಕುಗಳನ್ನು ಹೊಂದಿರುವ ಒಂದು ಪ್ರದೇಶವಾಗಿದೆ. ಇದು ರಾಜ್ಯದ ಭೌಗೋಳಿಕ ಸಮುದ್ರದ ಕಡಲಾಭಿಮುಖದ ತನ್ನ ಕರಾವಳಿಯ ಕಡೆಯಿಂದ ೨೦೦ ಸಮುದ್ರಯಾನ ಮೈಲಿಗಳವರೆಗೂ ವ್ಯಾಪಿಸಿದೆ. ಸಾಮಾನ್ಯ ಬಳಕೆಯಲ್ಲಿ, ಈ ಶಬ್ದವು ಭೌಗೋಳಿಕ ಸಮುದ್ರ ಮತ್ತು ೨೦೦ ಮೈಲಿ ಮಿತಿಯ ಆಚೆಗಿರುವ ಭೂಖಂಡದ ಮರಳದಂಡೆಯನ್ನೂ ಕೂಡ ಒಳಗೊಳ್ಳುತ್ತದೆ. == ವ್ಯಾಖ್ಯೆ == ಸಾಮಾನ್ಯವಾಗಿ, ಒಂದು ರಾಜ್ಯದ ಇಇಜಡ್ ವಲಯವು ತನ್ನ ಕಡಲತೀರದ ಎಲ್ಲೆಗೆರೆಯಿಂದ ೨೦೦ ಸಮುದ್ರಯಾನ ಮೈಲಿ (೩೭೦ ಕಿ.ಮಿ)ಯ ಅಂತರದಿಂದ ವಿಸ್ತರಿಸಲ್ಪಡುತ್ತದೆ. ಯಾವಾಗ ಇಇಜಡ್ ವಲವಯು ಅತಿಕ್ರಮಿಸಲ್ಪಡುತ್ತದೆಯೋ ಆಗ ಈ ನಿಯಮಕ್ಕೆ ಒಂದು ವಿನಾಯಿತಿಯು ಸಂಭವಿಸುತ್ತದೆ; ಅಂದರೆ, ರಾಜ್ಯದ ಕರಾವಳಿದಂಡೆಯ ಎಲ್ಲೆಗೆರೆಗಳು ಒಟ್ಟಾರೆಯಾಗಿ ೪೦೦ ಸಮುದ್ರಯಾನ ಮೈಲಿಗಳಿಗಿಂತ (೭೪೦ ಕಿ.ಮಿ) ಕಡಿಮೆ ಇರುತ್ತವೆ. ಯಾವಾಗ ಅತಿಕ್ರಮಣವು ಸಂಭವಿಸುತ್ತದೆಯೋ, ಇದು ವಾಸ್ತವಿಕ ಕಡಲತಡಿಯ ಮಿತಿಯನ್ನು ರೂಪಿಸುವುದಕ್ಕೆ ರಾಜ್ಯದವರೆಗೆ ಅಸ್ತಿತ್ವದಲ್ಲಿರುತ್ತದೆ. ಸಾಮಾನ್ಯವಾಗಿ, ಅತಿಕ್ರಮಣದ ಪ್ರದೇಶದ ಯಾವುದೇ ಒಂದು ಹಂತವು ಅದಕ್ಕೆ ಹತ್ತಿರದ ರಾಜ್ಯಕ್ಕೆ ಸಂಬಂಧಿಸಿರುತ್ತದೆ. ಒಂದು ರಾಜ್ಯದ ಮೀಸಲು ಆರ್ಥಿಕ ವಲಯವು ಅದರ ಭೌಗೋಳಿಕ ಸಮುದ್ರದ ಸಮುದ್ರಾಭಿಮುಖದ ಎಜ್ಜೆಯಿಂದ ಪ್ರಾರಂಭವಾಗುತ್ತದೆ ಮತ್ತು ಎಲ್ಲೆಗೆರೆಯಿಂದ ೨೦೦ ಸಮುದ್ರಯಾನ ಮೈಲಿಗಳವರೆಗಿನ (೩೭೦,೪ ಕಿ.ಮಿ) ಅಂತರದವರೆಗೂ ವ್ಯಾಪಿಸುತ್ತದೆ. ಆದ್ದರಿಂದ, ಇಇಜಡ್ ಮಗ್ಗುಲಲ್ಲಿರುವ (ಬದಿಯಲ್ಲಿರುವ) ವಲಯವನ್ನು ಒಳಗೊಳ್ಳುತ್ತದೆ. ರಾಜ್ಯಗಳು, ಇಇಜಡ್‌ನ ಮಿತಿಯನ್ನು ಹೊರತುಪಡಿಸಿ, ಕರಾವಳಿ ಎಲ್ಲೆಗೆರೆಯಿಂದ ೩೫೦ ಸಮುದ್ರಯಾನ ಮೈಲಿಗಳವರೆಗೆ (೬೪೮ ಕಿ.ಮಿ) ಭೂಖಂಡದ ಮರಳುದಂಡೆ ಎಂದು ಕರೆಯಲ್ಪಡುವ ಕಡಲತಲವನ್ನು ಹೊಂದುವ ಹಕ್ಕುಗಳನ್ನು ನೀಡಲ್ಪಟ್ಟಿರುತ್ತವೆ, ಆದರೆ ಅಂತಹ ಪ್ರದೇಶಗಳು ಆ ರಾಜ್ಯಗಳ ಇಇಜಡ್‌ನ ಭಾಗವಾಗಿರುವುದಿಲ್ಲ. ಭೂಖಂಡದ ಮರಳುದಂಡೆಯ ಕಾನೂನುಬದ್ಧ ವ್ಯಾಖ್ಯಾನವು ನೇರವಾಗಿ ಈ ಶಬ್ದದ ಭೂವೈಜ್ಞಾನಿಕ ಅರ್ಥಕ್ಕೆ ಸಂಬಂಧಿಸಿಲ್ಲ, ಏಕೆಂದರೆ ಇದು ಭೂಖಂಡದ ಏರು ಮತ್ತು ಇಳಿಜಾರು, ಮತ್ತು ಇಇಜಡ್‌ನ ಮಿತಿಯಲ್ಲಿ ಬರುವ ಎಲ್ಲಾ ಕಡಲತಲವನ್ನೂ ಕೂಡ ಒಳಗೊಳ್ಳುತ್ತದೆ. == ಇಇಜಡ್‌ನ ಮೂಲ == ಭೂಗೋಳಿಕ ಮಿತಿಯ ಹೊರಗಡೆ ಸಮುದ್ರತೀರದ ಪ್ರಕರಣಗಳನ್ನು ಉತ್ತಮವಾಗಿ ನಿಯಂತ್ರಿಸುವುದಕ್ಕೆ ರಾಷ್ಟ್ರಗಳ ಇಇಜಡ್‌ಗಳನ್ನು ನಿಗದಿಪಡಿಸುವ ಒಂದು ಕಲ್ಪನೆಯು ೨೦ನೆಯ ಶತಮಾನದ ಕೊನೆಯ ದಶಕಗಳಲ್ಲಿ ಮನ್ನಣೆಯನ್ನು ಪಡೆದುಕೊಂಡಿತು. ಪ್ರಾಥಮಿಕವಾಗಿ, ಒಂದು ದೇಶದ ಸರ್ವತಂತ್ರ ಸ್ವತಂತ್ರವಾದ ಭೂಗೊಳಿಕ ಜಲಸಂಪನ್ಮೂಲಗಳು ದಡಕ್ಕೂ ಆಚೆಗೆ ೩ ಸಮುದ್ರಯಾನ ಮೈಲಿಗಳವರೆಗೆ ಅಥವಾ ೬ ಕಿ.ಮಿ (ಕ್ಯಾನನ್ ಶಾಟ್‌ನ ವ್ಯಾಪ್ತಿ)ಗಳವರೆಗೆ ವಿಸ್ತರಿಸಲ್ಪಟ್ಟಿರುತ್ತವೆ. ಆಧುನಿಕ ಸಮಯಗಳಲ್ಲಿ ಸಾಂಪ್ರದಾಯಿಕವಾಗಿ, ಒಂದು ದೇಶದ ಸರ್ವತಂತ್ರ ಸ್ವತಂತ್ರವಾದ ಭೂಗೋಳಿಕ ಜಲಸಂಪನ್ಮೂಲವು ಸಮುದ್ರದಡದಿಂದ ಆಚೆಗೆ ೧೨ ಸಮುದ್ರಯಾನ ಮೈಲಿಗಳವರೆಗೆ (~೧೯ ಕಿ.ಮಿ) ವಿಸ್ತರಿಸಲ್ಪಟ್ಟಿರುತ್ತವೆ. ೧೯೭೦ರ ದಶಕದ ಪ್ರಾರಂಭದ ಅವಧಿಗಳಲ್ಲಿ ಎಕ್ಯುಡೊರ್ ೨೦೦ ಸಮುದ್ರಯಾನ ಮೈಲಿಗಳ ಆಚೆಗಿನ ಭೂಗೊಳಿಕ ಜಲಸಂಪನ್ಮೂಲದ ಹಕ್ಕುಕೇಳಿಕೆಯನ್ನು ಸ್ಪಷ್ಟಪಡಿಸಿತು. ಅವು ಯು.ಎಸ್ ಟ್ಯುನಾ-ಮೀನುಗಾರಿಕಾ ದೋಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮತ್ತು ಹೆಚ್ಚಿನ ಶುಲ್ಕವನ್ನು (ಅದನು ಯು.ಎಸ್. ಸರ್ಕಾರವು ನೀಡಿತು) ಹೇರುವುದಕ್ಕೆ ಪ್ರಾರಂಭಿಸಿದವು. ಕಾಲಕ್ರಮೇಣವಾಗಿ ಯು.ಎಸ್. ಹೇಗ್‌ನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಈ ಸಮಸ್ಯೆಯನ್ನು ಒಪ್ಪಿಸುವುದಕ್ಕೆ ಸಮ್ಮತಿಯನ್ನು ಸೂಚಿಸಿತು. ಇದು ಕಾಲಾನಂತರದಲ್ಲಿ ಅಂದರೆ ೧೯೮೨ ರಲ್ಲಿ ಮೂರನೆಯ ಯುನೈಟೆಡ್ ನೇಷನ್ಸ್ ಕನ್‌ವೆನ್ಷನ್ ಆನ್ ದ ಲಾ ಆಫ್ ದ ಸೀ ಇಂದ ಭೂಗೋಳಿಕ ಸಮುದ್ರ/ಜಲಸಂಪನ್ಮೂಲಗಳಿಗೆ ೧೨ ಸಮುದ್ರಯಾನ ಮೈಲಿಗಳು ಸ್ವಾಭಾವಿಕ ಪ್ರದೇಶ ಎಂಬ ಮನ್ನಣೆಯನ್ನು ನೀಡುವುದಕ್ಕೆ ಮತ್ತು ೨೦೦ ಮೈಲಿಗಳು ವಿಶಿಷ್ಟ ಅರ್ಥಿಕ ವಲಯಗಳು ಎಂಬ ಅಂತರಾಷ್ಟ್ರೀಯ ಮನ್ನಣೆಯನ್ನು ನೀಡುವುದಕ್ಕೆ ಕಾರಣವಾಯಿತು. ಕನ್‌ವೆನ್ಷನ್ (ರೀತಿನೀತಿಗೊಳಪಟ್ಟ) ರಾಜ್ಯಗಳ ಭಾಗ , ಆರ್ಟಿಕಲ್ ೫೫: ಮೀಸಲು ಆರ್ಥಿಕ ವಲಯದ ನಿರ್ದಿಷ್ಟ ಕಾನೂನು ಬದ್ಧ ಆಡಳಿತ ಮೀಸಲು ಆರ್ಥಿಕ ವಲಯವು ಭೂಗೋಳಿಕ ಸಮುದ್ರದ ಆಚೆಗಿರುವ ಮತ್ತು ಅದರ ಸಮಿಪಕ್ಕಿರುವ, ಈ ಭಾಗದಲ್ಲಿ ಸ್ಥಾಪಿತವಾಗಲ್ಪಟ್ಟಿರುವ ನಿರ್ದಿಷ್ಟ ಕಾನೂನುಬದ್ಧ ಆಡಳಿತಕ್ಕೆ ಒಳಪಟ್ಟಿರುವ ಒಂದು ಪ್ರದೇಶವಾಗಿದೆ, ಈ ಕಾನೂನುಬದ್ಧ ಆಡಳಿತದ ಅಡಿಯಲ್ಲಿ ಕರಾವಳಿ ತೀರದ ರಾಜ್ಯದ ಹಕ್ಕುಗಳು ಮತ್ತು ಎಲ್ಲೆಗಳು ಮತ್ತು ಇತರ ರಾಜ್ಯಗಳ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ಈ ರೀತಿನೀತಿಯ ಸಂಬಂಧಪಟ್ಟ ನಿಬಂಧನೆಗಳ ಮೂಲಕ ನಿಯಂತ್ರಿಸಲ್ಪಡುತ್ತವೆ. == ಇಇಜಡ್ ವಿವಾದಗಳು == ಮೀಸಲು ಆರ್ಥಿಕ ವಲಯದ ನಿಖರವಾದ ವ್ಯಾಪ್ತಿಯು ಸಮುದ್ರದ ನೀರಿನ ವಿಷಯದ ಮೇಲೆ ರಾಜ್ಯಗಳ ನಡುವಣ ವಿವಾದದ ಒಂದು ಸಾಮಾನ್ಯ ಸಂಗತಿಯಾಗಿದೆ. ಇಂತಹ ಒಂದು ವಿವಾದದ ಸಮರ್ಪಕವಾಗಿ-ತಿಳಿಯಲ್ಪಟ್ಟ ಉದಾಹರಣೆಯೆಂದರೆ ಯುನೈಟೆಡ್ ಕಿಂಗ್‌ಡಮ್ ಮತ್ತು ಐಲ್ಯಾಂಡ್‌ಗಳ ನಡುವಣ ಕಡಲ ಯುದ್ಧಗಳು. ನೊರ್ವೆ ಮತ್ತು ರಷ್ಯಾಗಳ ನಡುವಣ ಭೌಗೋಳಿಕ ಸಮುದ್ರ ಮತ್ತು ಇಇಜಡ್ ಈ ಎರಡರ ಸ್ಪಿಟ್ಸ್‌ಬರ್ಗನ್ ದ್ವೀಪಸಮೂಹಕ್ಕೆ ಸಂಬಂಧಿಸಿದ ವಿವಾದ, ಏಕೆಂದರೆ ಇದು ತನನ್ ಉತ್ಕೃಷ್ಟ ಒಪ್ಪಂದದ ಸ್ಥಿತಿಯ ಕಾರಣದಿಂದಾಗಿ ರಷ್ಯಾದ ಇಇಜಡ್ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ಈ ಎರಡು ದೇಶಗಳ ನಡುವೆ ಈ ಸೀಮೆಯ ವಿವಾದವನ್ನು ಪರಿಹರಿಸುವುದಕ್ಕೆ ಎಪ್ರಿಲ್ ೨೦೧೦ ರಲ್ಲಿ ಮೂಲತತ್ವದಲ್ಲಿ ಒಂದು ಒಪ್ಪಂದವು ಅನುಮೋದಿಸಲ್ಪಟ್ಟಿತು. ಈ ಒಪ್ಪಂದವು ಮರ್ಮನ್ಸ್ಕ್‌ನಲ್ಲಿ ಸಪ್ಟೆಂಬರ್ ೧೫, ೨೦೧೦ ರಂದು ಸಹಿಹಾಕಲ್ಪಟ್ಟಿತು. ರಾಕ್‌ಆಲ್‌ಗೆ ಸಂಬಂಧಿಸಿದ ಈ ವಿವಾದವು ಪ್ರಮುಖವಾಗಿ ಇಇಜಡ್‌ನ ಮೇಲೆ ಇದರ ಪರಿಣಾಮದ ಕಾರಣದಿಂದ ಉಂಟಾಗಿತ್ತು, ಮತ್ತು ಇದರ ಸಂಪನ್ಮೂಲಗಳು ಅಥವಾ ಭವಿಷೋದ್ದೇಶದ ಲಾಭಗಳ ಕಾರಣದಿಂದಾಗಿ ಉಂಟಾಗಿರಲಿಲ್ಲ. ದಕ್ಷಿಣ ಚೈನಾ ಸಮುದ್ರ (ಮತ್ತು ಸ್ಪಾರ್ಟ್ಲಿ ದ್ವೀಪಗಳು) ವು ಹಲವರು ಪಾರ್ಶ್ವದ ದೇಶಗಳ ನಡುವಣ ನಿರಂತರವಾದ ವಿವಾದವಾಗಿದೆ. ಟರ್ಕಿ ಮತ್ತು ಗ್ರೀಸ್ ದೇಶಗಳ ನಡುವೆ ಭೂಖಂಡದ ಮರಳುದಂಡೆ ಮತ್ತು ಇಇಜಡ್‌ಗಳಿಗೆ ಸಂಬಂಧಿಸಿದಂತೆ ನಿರಮ್ತರವಾದ ವಿವಾದವು ಅಸ್ತಿತ್ವದಲ್ಲಿದೆ. ಕ್ರೋಷಿಯಾದ ಜಡ್‌ಇ‌ಆರ್‌ಪಿ ಪರಿಸರ ವ್ಯವಸ್ಥೆ ಮತ್ತು ಆರ್ಕಟಿಕ್ ಸಮುದ್ರದಲ್ಲಿನ ಮೀನುಗಾರಿಕೆಗಳ ಸಂಅರಕ್ಷಣಾ ವಲಯವು ಇಟಲಿ ಮತ್ತು ಸೊಲ್ವೇನಿಯಾಗಳ ನಡುವೆ ವಿವಾದವನ್ನು ಉಂಉಮಾಡಿವೆ, ಇವು ಯುರೋಪಿಯನ್ ಒಕ್ಕೂಟಕ್ಕೆ ಕ್ರೋಷಿಯಾದ ಅಧಿಕಾರದ ಬೆದರಿಕೆಯನ್ನೊಡ್ಡಿದೆ. ಬ್ಯೂಫೋರ್ಟ್ ಸಮುದ್ರದ ಒಂದು ಚೂಪು-ಆಕೃತಿಯ ಪ್ರದೇಶವು ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳ ನಡುವಣ ವಿವಾದದ ಸಂಗತಿಯಾಗಿದೆ, ಏಕೆಂದರೆ ಈ ಪ್ರದೇಶವು ಹೇರಳ ಪ್ರಮಾಣದ ತೈಲ ಸಂಪನ್ಮೂಲವನ್ನು ಹೊಂದಿದೆ ಎಂಬುದಾಗಿ ವರದಿ ಮಾಡಲ್ಪಟಿದೆ. ಫ್ರಾನ್ಸ್ ತನ್ನ ಮತ್ತು ಕೆನಡಾದ ನಡುವಣ ಭೂಖಂಡದ ಮರಳುದಂಡೆ ಮತ್ತು ಇಇಜಡ್‌ಗಳ ಒಂದು ಹೊಸ ವ್ಯಾಖ್ಯಾನವನ್ನು ಆಧರಿಸಿ ಕೆನಡಾದ ಇಇಜಡ್‌ನ ಒಂದು ಭಾಗವನ್ನು ಸೇಂಟ್-ಪೈರ್ರೆ-ಎಟ್-ಮಿಕ್ವಿಲೆನ್‌ಗೆ ಕೇಳುತ್ತದೆ. ಸೇಂಟ್-ಪೈರ್ರೆ-ಎಟ್-ಮಿಕ್ವಿಲೆನ್ ಇದು ಸಂಪೂರ್ಣವಾಗಿ ಕೆನಡಾದ ಇಇಜಡ್ ಪ್ರದೇಶದಿಂದ ಆವೃತವಾಗಿದೆ. ಕಡಲತೀರದ ಹೊರಗೆ ಕಂಡುಬರುವ ಒಂದು ಚಿರಸ್ಥಾಯಿಯಾದ ಮಂಜುಗಡ್ದೆಯ ಪದರ ಪ್ರದೇಶಗಳೂ ಕೂಡ ಸಂಭಾವ್ಯ ವಿವಾದದ ಸಂಗತಿಗಳಾಗಿವೆ. == ಟ್ರಾನ್ಸ್‌ಬೌಂಡ್ರಿ ಸ್ಟಾಕ್‌ಗಳು == ಸಾಮಾನ್ಯವಾಗಿ ಎಫ್‌ಎಒ ದಿಂದ ಸ್ಥಾಪಿತಗೊಂಡ ನಿಯಮಾವಳಿಗಳಿಗೆ ಅನುಸಾರವಾಗಿರುವ ಮೀನುಗಾರಿಕಾ ನಿರ್ವಹಣೆಯು ಇಇಜಡ್‌ಗಳ ನಿಯಂತ್ರಣಕ್ಕೆ ಗಣನೀಯ ಪ್ರಮಾಣದ ಪ್ರಾಯೋಗಿಕ ಯಾಂತ್ರಿಕ ವ್ಯವಸ್ಥೆಗಳನ್ನು ಒದಗಿಸುತ್ತದೆ. ಈ ನಿಯಂತ್ರಣದ ವಿಷಯದಲ್ಲಿ ಟ್ರಾನ್ಸ್‌ಬೌಂಡ್ರಿ ಮೀನು ಸಂಗ್ರಹಗಳು ಒಂದು ಅತಿಮುಖ್ಯವಾದ ಸಂಗತಿಯಾಗಿವೆ. ಟ್ರಾನ್ಸ್‌ಬೌಂಡ್ರಿ ಸ್ಟಾಕ್‌ಗಳು ಕನಿಷ್ಠ ಪಕ್ಷ ಎರಡು ದೇಶಗಳ ಇಇಜಡ್‌ನ ವ್ಯಾಪ್ತಿಯಲ್ಲಿ ಕಂಡುಬರುವ ಮೀನು ಸಂಗ್ರಹಗಳಾಗಿವೆ. ಮತ್ತೊಂದು ಬದಿಯಲ್ಲಿ, ಸ್ಟ್ರಾಡ್ಲಿಂಗ್ ಸ್ಟಾಕ್‌ಗಳು ಒಂದು ಇಇಜಡ್‌ನೊಳಗೆ ಮತ್ತು ಯಾವುದೇ ಇಇಜ‌ಡ್‌ನ ಹೊರಗಡೆಯಲ್ಲಿ ಎತ್ತರದ ಸಮುದ್ರಗಳೆರಡರಲ್ಲೂ ಕಂಡುಬರುತ್ತದೆ. ಒಂದು ಸ್ಟಾಕ್ ಟ್ರಾನ್ಸ್‌ಬೌಂಡ್ರಿ ಮತ್ತು ಸ್ಟ್ರ್ಯಾಡ್ಲಿಂಗ್ ಈ ಎರಡೂ ಕೂಡ ಆಗಿರಬಹುದು. == ದೇಶದ ಪ್ರಕಾರ == === ಅರ್ಜೈಂಟೈನಾ‌ === ೧,೧೫೯,೦೬೩ ಕಿ.ಮಿ೨ === ಆಸ್ಟ್ರೇಲಿಯಾ === ಸಮುದ್ರಗಳು ಮತ್ತು ಸಮುದ್ರದಲ್ಲಿ ಮುಳುಗಿದ ಭೂಮಿಗಳ ಶಾಸನ ೧೯೭೩ ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್‌ಗಳ ನಂತರ ಆಸ್ಟ್ರೇಲಿಯಾವು ಮೂರನೆಯ ಅತ್ಯಂತ ದೊಡ್ದದಾದ ಮೀಸಲು ಆರ್ಥಿಕ ವಲಯವನ್ನು ಹೊಂದಿದೆ, ಆದರೆ ಇದು ತನ್ನ ಒಟ್ಟಾರೆ ಪ್ರದೇಶವು ರಷ್ಯಾದ ವಾಸ್ತವಿಕ ಭೂಗೊಳಿಕ ಪ್ರದೇಶಕ್ಕಿಂತ ಹೆಚ್ಚಾಗಿರುವ ನಿಟ್ಟಿನಲ್ಲಿ ರಷ್ಯಾಕ್ಕಿಂತ ಒಂದು ಹೆಜ್ಜೆ ಮುಂದಿದೆ. ಯುಎನ್ ಕನ್ವೆನ್ಷನ್‌ನ ಪ್ರಕಾರ, ಆಸ್ಟ್ರೇಲಿಯಾದ ಇಇಜಡ್ ವಲಯವು ಆಸ್ಟ್ರೇಲಿಯಾದ ಸಮುದ್ರತೀರದಿಂದ ಸಾಮಾನ್ಯವಾಗಿ ೨೦೦ ಸಮುದ್ರಯಾನ ಮೈಲಿಗಳವರೆಗೆ(೩೭೦ ಕಿ.ಮಿ) ವಿಸ್ತರಿಸುತ್ತದೆ ಮತ್ತು ಇದು ಎಲ್ಲಿ ಮತ್ತೊಂದು ರಾಜ್ಯದ ಜೊತೆಗೆ ಒಂದು ಸಮುದ್ರತೀರದ ಗಡಿನಿರ್ಧಾರದ ಒಪ್ಪಂದವು ಅಸ್ತಿತ್ವದಲ್ಲಿರುತ್ತದೆಯೋ ಅವುಗಳನ್ನು ಹೊರತುಪಡಿಸಿ ಇದರ ಬಾಹಿಕ ಭೂಕ್ಷೇತ್ರಗಳವರೆಗೆ ವ್ಯಾಪಿಸುತ್ತದೆ. ಎಪ್ರಿಲ್ ೨೦೦೮ ರಲ್ಲಿ, ಯುನೈಟೆಡ್ ನೇಷನ್ಸ್ ಮಂಡಳಿಯು ಭೂಖಂಡದ ಕಡಲತೀರದ ಮಿತಿಗಳನ್ನು ನಿರ್ದಿಷ್ಟಪಡಿಸಿತು, ಆಸ್ಟ್ರೇಲಿಯಾದ ಇಇಜಡ್‌ನ ಮಿತಿಯ ಆಚೆಗೆ ಹೆಚ್ಚುವರಿ ೨.೫ ಮಿಲಿಯನ್ ಚದರ ಕಿಲೋಮೀಟರ್ ಕಡತಲತೀರದ ಮೇಲೆ ಆಸ್ಟ್ರೇಲಿಯಾದ ಹಕ್ಕುಗಳನ್ನು ನಿರ್ದಿಷ್ಟಪಡಿಸಿತು. ಆಸ್ಟ್ರೇಲಿಯಾವು ತನ್ನ ಅಂಟಾರ್ಟಿಕಾ ಭೂಕ್ಷೇತ್ರದಿಂದ 200 ಸಮುದ್ರಯಾನ ಮೈಲಿಗಳ (370 ಕಿ.ಮಿ) ಒಂದು ಇಇಜಡ್ ಅನ್ನು ಯುಎನ್ ಮಂಡಳಿಗೆ ಒಪ್ಪಿಸುವ ಬಗ್ಗೆ ತನ್ನ ಅನುಮೋದನೆಯನ್ನೂ ನೀಡೀತು, ಆದರೆ ಇದು ಆ ಸಮಯದಲ್ಲಿ ಅಂಟಾರ್ಟಿಕ್ ಒಡಂಬಡಿಕೆಯಲ್ಲಿ ಸಂಯೋಜಿಸಲ್ಪಟ್ಟ ಸಹಕಾರದ ಸ್ಪೂರ್ತಿಯ ಜೊತೆಗೆ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬಾರದೆಂಬ ಮನವಿಯನ್ನು ಸಲ್ಲಿಸಿತು. ಆದಾಗ್ಯೂ ಕೂಡ, ಆಸ್ಟ್ರೇಲಿಯಾವು ತನ್ನ ಇಇಜಡ್ ಪ್ರದೇಶದಲ್ಲಿ ಕಡಲತೀರ ಮತ್ತು ನೀರಿನ ಆಧಾರವನ್ನು ಸಂಶೋಧಿಸುವ ಮತ್ತು ಬಳಸಿಕೊಳ್ಳುವ ಹಕ್ಕನ್ನು ಮುಂದುವರೆಸಿಕೊಂದು ಬಂದಿತು. === ಬ್ರೆಜಿಲ್‌ === ಬ್ರೆಜಿಲ್‌ನ ಮೀಸಲು ಆರ್ಥಿಕ ವಲಯವು ೩,೬೬೦,೯೯೫ ಕಿ.ಮಿ.ಗಳವರೆಗೆ ವ್ಯಾಪಿಸುತ್ತದೆ.೨. ೨೦೦೪ ರಲ್ಲಿ, ಬ್ರೆಜಿಲ್ ಭೂಖಂಡದ ಕಡಲತೀರದ ಮಿತಿಗಳ ಮೇಲಿನ ಯುನೈಟೆಡ್ ನೇಷನ್ಸ್ ಮಂಡಳಿಗೆ (ಸಿಎಲ್‌ಸಿಎಸ್) ತನ್ನ ಕಡಲತೀರದ ಭೂಖಂಡದ ಮಿತಿ ಯನ್ನು ವಿಸ್ತರಿಸುವುದಕ್ಕೆ ಹಕ್ಕುಕೇಳಿಕೆಯನ್ನು ಮಂಡಿಸಿತು. === ಕೆನಡಾ === ಕೆನಡಾವು ತನ್ನ ವಿಶಿಷ್ಟ ಅರ್ಥಿಕ ವಲಯದ ವಿಷಯದಲ್ಲಿ ಅಸಾಮಾನ್ಯವಾಗಿದೆ, ಇದು ತನ್ನ ಭೂಗೋಳಿಕ ಜಲಸಂಪನ್ಮೂಲಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ ಅಂದರೆ ೨,೭೫೫,೫೬೪ ಕಿ.ಮಿ ೨ ಮೀಸಲು ಆರ್ಥಿಕ ವಲಯವನ್ನು ಆವರಿಸಿಕೊಂಡಿದೆ. ಭೂಗೋಳಿಕ ಜಲಸಂಪನ್ಮೂಲವು ಕಡಲತೀರದಿಂದ ಸಮುದ್ರಯಾನ ಮೈಲಿಗಳವರೆಗೆ ಮಾತ್ರ ವಿಸ್ತರಿಸಿದೆ, ಆದರೆ ಒಳನಾಡು ಕಡಲತೀರಗಳನ್ನೂ ಕೂಡ ಅಂದರೆ ಹಡ್ಸನ್ ಬೇ (ಸರಿಸುಮಾರು 300 (560 ; 350 ) ಕಡೆಗೆ), ಗಲ್ಫ್ ಸೇಂಟ್ ಆಫ್ ಲಾರೆನ್ಸ್ ಮತ್ತು ಆರ್ಕಟಿಕ್ ಆರ್ಕಿಪ್ಲ್ಯಾಗೋದ ಆಂತರಿಕ ಜಲಸಂಪನ್ಮೂಲಗಳನ್ನೂ ಒಳಗೊಳ್ಳುತ್ತದೆ. === ಚಿಲಿ === ಚಿಲಿಯ ಇಇಜಡ್ ಜೌನ್ ಫರ್ನಾಂಡೆಜ್ ದ್ವೀಪಗಳು, ದೆಸ್ವೆಂಟುರ್ದಾಸ್ ದ್ವೀಪಗಳು ಮತ್ತು ಈಸ್ಟರ್ ದ್ವೀಪಗಳನ್ನು ಒಳಗೊಳ್ಳುತ್ತದೆ. === ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ === === ಡೆನ್ಮಾರ್ಕ್‌‌ === ಡೆನ್‌ಮಾರ್ಕ್‌ನ ಕಿಂಗ್‌ಡಮ್ ಗ್ರೀನ್‌ಲ್ಯಾಂಡ್ ಮತ್ತು ಫೆರೋ ದ್ವೀಪಗಳ ಎರಡು ಸ್ವಯಮಾಧಿಪತ್ಯದ ಪ್ರಾಂತಗಳನ್ನು ಒಳಗೊಳ್ಳುತ್ತದೆ. ಫೆರೋ ದ್ವೀಪಗಳ ಇಇಜಡ್‌ಗಳು ಯುರೋಪಿಯನ್ ಒಕ್ಕೂಟದ ಇಇಜಡ್‌ಗಳ ಭಾಗವಾಗಿಲ್ಲ. === ಯೂರೋಪ್‌ ಒಕ್ಕೂಟ === ಸಾಮಾನ್ಯ ಮೀನುಗಾರಿಕಾ ಪಾಲಿಸಿಗಳನ್ನೂ ನೋಡಿ ಯುರೋಪಿಯನ್ ಒಕ್ಕೂಟದ ಇಇಜಡ್ ಸಹಭಾಗಿತ್ವದ ವಿಭಾಗವಾಗಿದೆ, ಆದ್ದರಿಂದ ಒಂದು ದೇಶದಿಂದ ಹಡಗು ಅಥವಾ ಆ ದೇಶದ ಪ್ರಜೆಗಳು ಮತ್ತೊಂದು ದೇಶದ ಇಇಜಡ್ ಪ್ರದೇಶದಲ್ಲಿ ಮೀನುಗಾರಿಕೆಯನ್ನು ನಡೆಸಬಹುದಾಗಿದೆ. ಈ ಸಂಯೋಜಿತ ವಲಯವು ೨೫ ಮಿಲಿಯನ್ ಕಿ.ಮಿ೨ ಆಗಿದೆ, ಮತ್ತು ಇದು ಜಗತ್ತಿನ ಅತ್ಯಂತ ದೊಡ್ಡ ಇಇಜಡ್ ವಲಯವಾಗಿದೆ. === ಫ್ರಾನ್ಸ್‌‌ === ಫ್ರಾನ್ಸ್ ದೇಶದ ಹಲವಾರು ಸಮುದ್ರಾಂತರದ ವಿಭಾಗಗಳು ಮತ್ತು ಇದರ ಭೂಕ್ಷೇತ್ರಗಳು ಜಗತ್ತಿನ ಎಲ್ಲಾ ಸಮುದ್ರಗಳಲ್ಲಿ ಹರಡಿರುವುದರಿಂದ, ಇದು ಜಗತ್ತಿನ ಎರಡನೆಯ-ಆತ್ಯಂತ ದೊಡ್ಡ ಇಇಜಡ್ ವಿಭಾಗವನ್ನು ಹೊಂದಿದೆ, ೧೧,೦೩೫,೦೦೦ ಕಿ.ಮಿ೨ (೪,೨೬೦,೦೦೦ mi೨) ಇಇಜಡ್ ಪ್ರದೇಶವನ್ನು ಹೊಂದಿರುವ ಇದು ಯುನೈಟೆಡ್ ಸ್ಟೇಟ್ಸ್‌ನ (೧೧,೩೫೧,೦೦೦ ಕಿ.ಮಿ೨ / ೪,೩೮೩,೦೦೦ mi೨) ನಂತರದ ಸ್ಥಾನದಲ್ಲಿದೆ, ಆದರೆ ಆಸ್ಟ್ರೇಲಿಯಾದ ಇಇಜಡ್‌ಗಿಂತ (೮,೧೪೮,೨೫೦ ಕಿ.ಮಿ೨ / ೪,೧೧೧,೩೧೨ mi೨) ಮೇಲಿನ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಫ್ರಾನ್ಸ್‌ನ ಇಇಜಡ್ ಜಗತ್ತಿನ ಎಲ್ಲಾ ಇಇಜಡ್‌ಗಳ ಸರಿಸುಮಾರು ೮% ಆವರಿಸಿಕೊಂಡಿದೆ, ಹಾಗೆಯೇ ಫ್ರೆಂಚ್ ಗಣರಾಜ್ಯದ ಭೂಕ್ಷೇತ್ರವು ಜಗತ್ತಿನ ಭೂಕ್ಷೇತ್ರದ ಕ್ಷೇತ್ರದ ೦.೪೫% ಮಾತ್ರವೇ ಆಗಿದೆ. === ಗ್ರೀಸ್‌‌ === ಯುಎನ್‌ಸಿಎಲ್‌ಒಎಸ್ ೧೯೮೨ ಹಾಗೆಯೇ ಕಸ್ಟಮರಿ ಇಂಟರ್‌ನ್ಯಾಷನಲ್ ಲಾ ಗಳ ಪ್ರಕಾರ ಗ್ರೀಸ್ ಒಂದು ಮೀಸಲು ಆರ್ಥಿಕ ವಲಯವಾಗಿ ಮಾನ್ಯತೆಯನ್ನು ಪಡೆಯುವ ಅರ್ಹತೆಯನ್ನು ಹೊಂದಿದ್ದರೂ ಕೂಡ ಪ್ರಸ್ತುತದವೆರೆಗೂ ಕೂಡ ಅದು ಈ ರೀತಿಯಾಗಿ ವರ್ಗೀಕರಿಸಲ್ಪಟ್ಟಿಲ್ಲ. ಗ್ರೀಸ್ ತನ್ನನ್ನು ಮೀಸಲು ಆರ್ಥಿಕ ವಲಯ ಎಂಬುದಾಗಿ ಘೋಷಿಸಿಕೊಂಡರೆ ಇದು ಕ್ಯಾಸಸ್ ಬೆಲ್ಲಿಯ ಟರ್ಕಿಯಿಂದ ನೇರವಾದ ಬೆದರಿಕೆಗೆ ಕಾರಣವಾಗುತ್ತದೆ, ಆದಾಗ್ಯೂ ಕೂಡ ಗ್ರೀಸ್ ಇಲ್ಲಿಯವರೆಗೂ ಯಾವುದೇ ರೀತಿಯ ಘೋಷಣೆಯಿಂದ ನಿರ್ಬಂಧಿತವಾಗಿತ್ತು. ಕ್ಯಾಸಸ್ ಬೆಲ್ಲಿಯ ಟರ್ಕಿಯ ಘೋಷಣೆಯು ಇಇಜಡ್‌ನ ವಿವಾದಕ್ಕೆ ಸಂಬಂಧಿಸಿದ ಸಂಗತಿಯಾಗಿಲ್ಲ. ಟರ್ಕಿಯು ಏಜಿಯನ್ ಸಮುದ್ರದ ಸ್ಥಿತಿಯನ್ನು ಅರೆ-ಮುಚ್ಚಲ್ಪಟ ಸಮುದ್ರ ಎಂಬುದಾಗಿ ಪರಿಗಣಿಸುತ್ತದೆ, ಆ ಕಾರಣದಿಂದ ಇದಕ್ಕೆ ವಿಶಿಷ್ಟ ಸ್ವಭಾವವನ್ನು ನೀಡುತ್ತದೆ (ಅಡ್ರಿಯಾಟಿಕ್‌ನಂತಹ ಇತರ ಅರೆ-ಮುಚ್ಚಲ್ಪಟ ಸಮುದ್ರದಂತಲ್ಲದೇ ಅಥವಾ ಕಪ್ಪು ಸಮುದ್ರದಂತಹ ಪೂರ್ತಿ-ಮುಚ್ಚಲ್ಪಟ್ಟ ಸಮುದ್ರದಂತಲ್ಲದೇ ಇದಕ್ಕೆ ವಿಶಿಷ್ಟ ಸ್ವರೂಪವನ್ನು ಒದಗಿಸುತ್ತದೆ). ಅದಕ್ಕೂ ಹೆಚ್ಚಾಗಿ, ಟರ್ಕಿಯು ದೇಶಗಳಿಗೆ ತಮ್ಮ ಭೂಕ್ಷೇತ್ರದ ನೀರಿನ ಸಂಪನ್ಮೂಲದ ಅಗಲವನ್ನು 12 (22 ) ವರೆಗೆ ವಿಸ್ತರಿಸುವುದಕ್ಕೆ ಅನುಮತಿಸುವ ಯುಎನ್‌ಸಿಎಲ್‌ಒಎಸ್‌ನ ಕರಾರುದಾರ ದೇಶವಾಗಿಲ್ಲ. ಟರ್ಕಿಯು ಯುಎನ್‌ಸಿಎಲ್‌ಒಎಸ್‌ನ ಆರ್ಟಿಕಲ್‌ಗಳ ಒಂದು ಸ್ಥಿರ ವಿರೋಧಿಯಾಗಿದ್ದರೂ ಕೂಡ, ಇದು ಕಪ್ಪು ಸಮುದ್ರದಲ್ಲಿ ತನ್ನ ಸ್ವಂತ ಭೂಪ್ರದೇಶವನ್ನು 12 (22 ) ವರೆಗೆ ವಿಸ್ತರಿಸಿದೆ. ಮತ್ತು ಅದಕ್ಕೂ ಹೆಚ್ಚಾಗಿ, ೧೯೯೫ ರಲ್ಲಿ ಯುಎನ್‌ಸಿಎಲ್‌ಒಎಸ್‌ನ ಗ್ರೀಕ್ ಸಂಸತ್ತು ಸ್ಥಿರೀಕರಣದ (ಎಲ್ಲಾ ಕರಾರುದಾರ ದೇಶಗಳು ಮಾಡಲ್ಪಟ್ಟಂತೆ) ಸ್ವಲ್ಪ ಕಾಲದ ನಂತರ, ಟರ್ಕಿ ಈ ರೀತಿಯಾಗಿ ಘೋಷಣೆಯನ್ನು ಮಾಡಿತು - ಗ್ರೀಸ್ ತನ್ನ ಭೂಪ್ರದೇಶದ ನೀರಿನ ಅಗಲದ ಗಡಿಯನ್ನು ವಿಸ್ತರಿಸಿದರೆ,6 (11 ) ಟರ್ಕಿಯು ಈ ಪ್ರಕ್ರಿಯೆಯನ್ನು ಒಂದು ಪ್ರಭಾವ ನಿರೋಧದ ಪ್ರಯತ್ನ ಮತ್ತು ಅದರ ಸಾರ್ವಭೌತ್ವದ ವಿರುದ್ಧದ ನೇರವಾದ ಅಪರಾಧ ಎಂಬುದಾಗಿ ಪರಿಗಣಿಸುತ್ತದೆ ಮತ್ತು ಆದ್ದರಿಂದ ಗ್ರೀಸ್‌ಗೆ ಯುದ್ಧವನ್ನು (ಕ್ಯಾಸಸ್ ಬೆಲ್ಲಿ) ನಡೆಸುವ ಬೆದರಿಕೆಯನ್ನು ಒಡ್ಡಿತು. === ಭಾರತ === ೧,೬೪೧,೫೧೪ ಕಿ.ಮಿ೨ ಅಂಡಮಾನ್ ದ್ವೀಪಗಳು, ೬೬೩,೬೨೯ ಕಿ.ಮಿ೨ ಒಟ್ಟು: ೨,೩೦೫,೧೪೩ ಕಿ.ಮಿ೨ === ಇಂಡೊನೇಷಿಯಾ‌ === ೬ ೧೫೯ ೦೩೨ ಕಿ.ಮಿ೨ === ಜಪಾನ್‌‌ === ಮಾರ್ಕಸ್ ದ್ವೀಪ: ೪೨೮,೮೭೫ ಕಿ.ಮಿ೨ ಓಗಾಸವಾರಾ ದ್ವೀಪಗಳು: ೮೬೨,೭೮೨ ಕಿ.ಮಿ೨ ಪೆಸಿಫಿಕ್ ಸಾಗರ (ಜಪಾನ್): ೧,೧೬೨,೩೩೪ ಕಿ.ಮಿ೨ ರಾಯೂಕ್ಯೂ ದ್ವೀಪಗಳು: ೧,೩೯೪,೬೭೬ ಕಿ.ಮಿ೨ ಜಪಾನ್ ಸಮುದ್ರ: ೬೩೦,೭೨೧ ಕಿ.ಮಿ೨ ಒಟ್ಟು: ೪,೪೭೯,೩೫೮ ಜಪಾನ್ ತನ್ನ ಎಲ್ಲಾ ಏಷಿಯನ್ ನೆರೆದೇಶಗಳ (ರಷ್ಯಾ, ದಕ್ಷಿಣ ಕೊರಿಯಾ, ಪಿಆರ್‌ಸಿ ಮತ್ತು ಆರ್‌ಒಸಿ) ಜೊತೆಗೆ ಇಇಜಡ್ ಸೀಮೆಗಳ ವಿಷಯದಲ್ಲಿ ವಿವಾದವನ್ನು ಹೊಂದಿದೆ. ಈ ಮೇಲಿನ, ಮತ್ತು ಸಮುದ್ರದ ಸುತ್ತಮುತ್ತಲಿನ ಯುಎಸ್ ಪ್ರಾಜೆಕ್ಟ್‌ಗಳ ಇತರ ಸಂಬಂಧಿತ ನಕ್ಷೆಗಳು ಜಪಾನ್‌ನ ಘೋಷಿತ ಗಡಿಗಳನ್ನು ಸೂಚಿಸುತ್ತವೆ, ಮತ್ತು ನೆರೆದೇಶಗಳ ಅಧಿಕಾರದ ಘೋಷಣೆಗಳನ್ನು ಇದು ಪರಿಗಣಿಸುವುದಿಲ್ಲ. === ಮೆಕ್ಸಿಕೊ‌ === ಮೆಕ್ಸಿಕೋದ ಮೀಸಲು ಆರ್ಥಿಕ ವಲಯಗಳು ಒಟ್ಟು ಮೇಲ್ಮೈಯ ೫,೧೪೪,೨೯೫ ಕಿ.ಮಿ೨ ಪ್ರದೇಶಗಳನ್ನು ಒಳಗೊಳ್ಳುತ್ತವೆ, ಮತ್ತು ಇದು ಮೆಕ್ಸಿಕೋವನ್ನು ಜಗತ್ತಿನ ಅತ್ಯಂತ ಹೆಚ್ಚಿನ ಭೂಪ್ರದೇಶವನ್ನು ಹೊಂದಿರುವ ದೇಶದ ಯಾದಿಗೆ ಸೇರಿಸುತ್ತದೆ. === ನ್ಯೂಜಿಲೆಂಡ್‌‌ === ಸಮುದ್ರ ಸುತ್ತಲಿನ ಯುಎಸ್ ಪ್ರಾಜೆಕ್ಟ್‌ನ ಪ್ರಕಾರ, ನ್ಯೂಜಿಲೆಂಡ್‌ನ ಇಇಜಡ್ ೪,೦೮೩,೭೪೪ ಕಿ.ಮಿ೨ ಪ್ರದೇಶವನ್ನು ಆವರಿಸುತ್ತದೆ, ಇದು ದೇಶದ ಭೂಪ್ರದೇಶದ ಸರಿಸುಮಾರು ಹದಿನೈದು ಪಟ್ಟು ಹೆಚ್ಚಾಗಿದೆ. ನ್ಯೂಜಿಲೆಂಡ್‌ನ ಇಇಜಡ್‌ನ ಗಾತ್ರದ ಬಗ್ಗೆ ಮೂಲಗಳು ಗಣನೀಯವಾಗಿ ವಿಭಿನ್ನವಾದ ಸಂಗತಿಗಳನ್ನು ಸೂಚಿಸುತ್ತವೆ; ಉದಾಹರಣೆಗೆ, ಇತ್ತೀಚಿನ ಸರ್ಕಾರದ ಒಂದು ಪ್ರಕಟಣೆಯು ಇಇಜಡ್ ಪ್ರದೇಶವನ್ನು ಒಟ್ಟಾರೆಯಾಗಿ ೪,೩೦೦,೦೦೦ ಕಿ.ಮಿ೨ ಎಂಬುದಾಗಿ ನೀಡಿತು. ಈ ಅಂಕಿಅಂಶಗಳು ನ್ಯೂಜಿಲೆಂಡ್‌ನ ಇಇಜಡ್‌ನ ಸಮರ್ಪಕವಾದ ಗಾತ್ರವನ್ನು ಒದಗಿಸುತ್ತವೆ, ಮತ್ತು ರೆಲ್ಮ್ ಆಫ್ ನ್ಯೂಜಿಲೆಂಡ್‌ನ ಇತರ ಭೂಕ್ಷೇತ್ರಗಳ ಇಇಜಡ್‌ಗಳನ್ನು (ಟೊಕೆಲಿಯು, ನಿಯು, ಕಾಕ್ ದ್ವೀಪಗಳು ಮತ್ತು ರಾಸ್ ಡಿಪೆಂಡೆನ್ಸಿ) ಗಳನ್ನು ಒಳಗೊಳ್ಳುವುದಿಲ್ಲ. === ನಾರ್ವೆ‌ === ನಾರ್ವೆಯು ತನ್ನ ಕರಾವಳಿ ತೀರದ ಸುತ್ತಮುತ್ತ ೮೧೯ ೬೨೦ ಕಿ.ಮಿ೨ಯ ಮೀಸಲು ಆರ್ಥಿಕ ವಲಯವನ್ನು ಹೊಂದಿದೆ. ನಾರ್ವೆಯು ಸ್ವಾಲ್‌ಬಾರ್ಡ್ ಮತ್ತು ಜಾನ್ ಮಾಯನ್‌ಗಳ ಸುತ್ತಮುತ್ತಲಿನ ವಲಯಗಳನ್ನು ಒಳಗೊಂಡಂತೆ ೧,೮೭೮,೯೫೩ ಕಿ.ಮಿ೨ ಮೀನುಗರಿಕಾ ವಲಯವನ್ನು ಹೊಂದಿದೆ. ವಾಸ್ತವದ ಸಂಗತಿಯೆಂದರೆ ಯುರೋಪಿಯನ್ ಒಕ್ಕೂಟವು ತನ್ನ ಆರ್ಥಿಕ ವಲಯವನ್ನು ಹಂಚಿಕೊಳ್ಳುವ ಮುಖ್ಯ ಉದ್ದೇಶವೆಂದರೆ ನಾರ್ವೆಯು ಇಯುವನ್ನು ಒಂದು ಸದಸ್ಯ ರಾಷ್ಟ್ರವಾಗಿ ಸೇರಿಸಿಕೊಳ್ಳದಿರುವುದೇ ಆಗಿದೆ. ಎಪ್ರಿಲ್ ೨೦೦೯ ರಲ್ಲಿ, ಭೂಖಂಡದ ಕಡಲತೀರದ ಮಿತಿಗಳ ಯುನೈಟೆಡ್ ನೇಷನ್ ಮಂಡಳಿಯು ಭೂಖಂಡದ ಕಡಲತೀರದ ಹೆಚ್ಚುವರಿ ೨೩೫,೦೦೦ ಚದರ ಕಿಲೋಮೀಟರ್‌ಗೆ ನಾರ್ವೆಯ ಹಕ್ಕುಕೇಳಿಕೆಯನ್ನು ಅನುಮೋದಿಸಿತು. ನಾರ್ವೆ ಮತ್ತು ರಷ್ಯಾ ಇವರೆಡೂ ರಾಷ್ಟ್ರಗಳು ಬೇರೆಂಟ್ಸ್ ಸಮುದ್ರದ ಕಡಲತೀರದ ಒಂದು ಭಾಗದ ಮೇಲಿನ ಊರ್ಜಿತ ಹಕ್ಕುಕೇಳಿಕೆಗಳನ್ನು ಹೊಂದಿದ್ದವು ಎಂಬುದನ್ನು ಮಂಡಳಿಯು ಕಂಡುಹಿಡಿಯಿತು. === ಪಾಕಿಸ್ತಾನ‌ === ೨೦೧,೫೨೦ ಕಿ.ಮಿ೨ === ಫಿಲಿಫೈನ್ಸ್‌‌ === ಫಿಲಿಫೈನ್ಸ್‌ನ ಇಇಜಡ್ ೨,೨೬೫,೬೮೪ (೧೩೫,೭೮೩) ಕಿ.ಮಿ೨ ಪ್ರದೇಶವನ್ನು ಆವರಿಸಿಕೊಂಡಿದೆ. === ಪೋಲೆಂಡ್‌ === ಪೊಲಿಷ್ ಇಇಜಡ್ ಬಾಲ್ಟಿಕ್ ಸಮುದ್ರದ ಮಿತಿಯೊಳಗೆ ೩೦,೫೩೩ ಕಿ.ಮಿ೨ ಪ್ರದೇಶವನ್ನು ಹೊಂದಿದೆ. === ಪೋರ್ಚುಗಲ್‌ === ಪೋರ್ಚುಗಲ್ ೩೨೭,೬೬೭ ಕಿ.ಮಿ೨ ೯೫೩,೬೩೩ ಕಿ.ಮಿ೨ ೪೪೬,೧೦೮ ಕಿ.ಮಿ೨ ಒಟ್ಟು : ೧,೭೨೭,೪೦೮ ಕಿ.ಮಿ೨ ಪೋರ್ಚುಗಲ್ ಇಯು ೩ನೆಯ ಮೂರನೆಯ ಅತ್ಯಂತ ದೊಡ್ದ ಮೀಸಲು ಆರ್ಥಿಕ ವಲಯವಾಗಿದೆ ಮತ್ತು ಜಗತ್ತಿನ ೧೧ನೆಯ ಅತ್ಯಂತ ದೊಡ್ದ ವಲಯವಾಗಿದೆ. ಪೋರ್ಚುಗಲ್‌ನ ಇಇಜಡ್ ಮತ್ತು ಸ್ಪೇನ್‌ನ ಇಇಜಡ್‌ಗಳ ನಡುವಣ ಮಿತಿಯು ವಿವಾದಾಸ್ಪದ ಸಂಗತಿಯಾಗಿದೆ. ಸ್ಪೇನ್ ಮತ್ತು ಪೋರ್ಚುಗಲ್ ನಡುವಣ ಸದರ್ನ್‌ಮೋಸ್ಟ್ ಇಇಜಡ್ ಗಡಿಯು ಮಡೈರಾ ಮತ್ತು ಕ್ಯಾನರಿ ದ್ವೀಪಗಳ ನಡುವೆ ಮಧ್ಯಭಾಗದಲ್ಲಿ ಸಮದೂರದಲ್ಲಿ ಹಾಕಲ್ಪಟ್ಟ ಗೆರೆಯನ್ನು ಒಳಗೊಂಡಿರಬೇಕು ಎಂಬುದಾಗಿ ಸ್ಪೇನ್ ಹೇಳುತ್ತದೆ. ಆದರೆ ಪೋರ್ಚುಗಲ್ ಸೆವೇಜ್ ದ್ವೀಪಗಳ (ಕ್ಯಾನರೀಸ್‌ನ ಉತ್ತರ ಭಾಗದಲ್ಲಿರುವ ಒಂದು ಸಣ್ಣ ಆರ್ಕಿಪೆಲಗೋ) ಮೇಲೆ ಸಾರ್ವಭೌಮತ್ವವನ್ನು ಹೊಂದಿದೆ, ಮತ್ತು ಇದು ಇಇಜಡ್ ಸೀಮೆಯನ್ನು ದಕ್ಷೀನದ ಕಡೆಗೆ ತಳ್ಳುತ್ತದೆ ಎಂಬುದಾಗಿ ಹೇಳುತ್ತದೆ. ಸಮುದ್ರದ ಶಾಸನದ ಯುನೈಟೆಡ್ ನೆಷನ್ ಕನ್‌ವೆನ್ಷನ್‌ನ ಆರ್ಟಿಕಲ್ ೧೨೧ ರ ಪ್ರಕಾರ ಸೆವೇಜ್ ದ್ವೀಪಗಳು ಒಂದು ಪ್ರತ್ಯೇಕವಾದ ಭೂಖಂಡದ ಕಡಲತೀರವನ್ನು ಹೊಂದಿಲ್ಲ ಎಂಬ ಆಧಾರದ ಮೇಲೆ ಸ್ಪೇನ್ ಇದನ್ನು ವಿರೋಧಿಸುತ್ತದೆ: ಮಾನವ ಆವಾಸಕ್ಕೆ ಅಥವಾ ಆರ್ಥಿಕ ಜೀವನಕ್ಕೆ ಆಸ್ಪದವನ್ನೀಯದ ಸ್ವಂತ ವಿಭಾಗದ ಶಿಲೆಗಳು ಯಾವುದೇ ಮೀಸಲು ಆರ್ಥಿಕ ವಲಯ ಅಥವಾ ಭೂಖಂಡದ ಕಡಲತೀರವನ್ನು ಹೊಂದಿರುವುದಿಲ್ಲ." ಪೋರ್ಚುಗಲ್ ನೆರೆದೇಶದ ಭೂಖಂಡದ ಕಡಲತೀರದ ೧.೨ ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಗೆ ತನ್ನ ಸೀಮಾಮಿತಿಯನ್ನು ವಿಸ್ತರಿಸುವುದಕ್ಕೆ ಮೇ ೨೦೦೯ ರಲ್ಲಿ ಹಕ್ಕುಕೇಳಿಕೆಯನ್ನು ಮಂಡಿಸಿತು. === ರಷ್ಯಾ‌ === ಏಷ್ಯಾ: ೬, ಬಾಲ್ಟಿಕ್: ೨೪,೫೪೯ ಬೇರೆಂಟ್ಸ್ ಸಮುದ್ರ: ೧,೧೫೯,೫೯೪ ಒಟ್ಟು ೭,೫೬೬,೬೭೩ ಕಿ.ಮಿ೨ === ದಕ್ಷಿಣ ಆಫ್ರಿಕಾ‌ === ದಕ್ಷಿಣ ಆಫ್ರಿಕಾದ ಇಇಜಡ್ ವಲಯವು ಆಫ್ರಿಕನ್ ಮುಖ್ಯಪ್ರದೇಶದ ಪಾರ್ಶ್ವದಲ್ಲಿರುವ ಪ್ರದೇಶ ಮತ್ತು ಪ್ರಿನ್ಸ್ ಎಡ್‌ವರ್ಡ್ ದ್ವೀಪಗಳ ಸುತ್ತಮುತ್ತಲಿರುವ ಪ್ರದೇಶಗಳೆರಡನ್ನೂ ಒಳಗೊಳ್ಳುತ್ತದೆ, ಇದು ಒಟ್ಟಾರೆಯಾಗಿ ೧ ೫೩೫ ೫೩೮ ಕಿ.ಮಿ೨ ಪ್ರದೇಶವನ್ನು ಹೊಂದಿದೆ. ಮುಖ್ಯಭೂಮಿ ೧ ೦೬೮ ೬೫೯ ಕಿ.ಮಿ೨ ಪ್ರಿನ್ಸ್ ಎಡ್ವರ್ಡ್ ದ್ವೀಪಗಳು ೪೬೬ ೮೭೯ ಕಿ.ಮಿ೨ === ದಕ್ಷಿಣ ಕೊರಿಯಾ‌ === ಕ್ಷೇತ್ರ:' ೩೦೦,೮೫೧ (೨೨೫,೨೧೪) ಕಿ.ಮಿ೨ === ಯುನೈಟೆಡ್‌ ಕಿಂಗ್‌ಡಮ್‌ === ಯುನೈಟೆಡ್ ಕಿಂಗ್‌ಡಮ್‌ನ ಮೀಸಲು ಆರ್ಥಿಕ ವಲಯವು ಜಗತ್ತಿನಲ್ಲಿ ಎಂಟನೆಯ ಅತ್ಯಂತ ದೊಡ್ಡ ವಲಯವಾಗಿದೆ. ಇದು ಯುನೈಟೆಡ್ ಕಿಂಗ್‌ಡಮ್, ಕ್ರೌನ್ ಡಿಪೆಂಡೆನ್ಸೀಸ್, ಮತ್ತು ಬ್ರಿಟೀಷ್ ಸಮುದ್ರಾಂತರದ ಭೂಕ್ಷೇತ್ರಗಳನ್ನು ಸುತ್ತುವರೆದಿರುವ ಮೀಸಲು ಆರ್ಥಿಕ ವಲಯಗಳನ್ನು ಒಳಗೊಳ್ಳುತ್ತದೆ. === ಸಂಯುಕ್ತ ಸಂಸ್ಥಾನ === ೧೧,೩೫೧,೦೦೦ ಕಿ.ಮಿ೨ ಪ್ರದೇಶವನ್ನು ಆವರಿಸಿಕೊಂಡಿರುವ ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಶಿಷ್ಟ ಆರ್ಥಿಕ ವಲಯವು ಜಗತ್ತಿನಲ್ಲಿ ಅತ್ಯಂತ ದೊಡ್ಡದಾಗಿದೆ. ಇದರ ಇಇಜಡ್‌ನ ಪ್ರದೇಶಗಳು ಕೇವಲ ಈಸ್ಟರ್ನ್ ಮತ್ತು ವೆಸ್ಟರ್ನ್ ಕಡಲತೀರಗಳು ಮತ್ತು ಮೆಕ್ಸಿಕೋದ ಗಲ್ಫ್-ಭೂಖಂಡ ಯುನೈಟೆಡ್ ಸ್ಟೇಟ್ಸ್‌ನ ಸೀಮೆಯ ಪ್ರದೇಶದ ಮೇಲೆ ಸ್ಥಾಪಿತವಾಗಿಲ್ಲ, ಆದರೆ ಕ್ಯಾರಿಬೀನ್ ಸಮುದ್ರಪೆಸಿಫಿಕ್ ಸ್ಗರ ಮತ್ತು ಆರ್ಕಟಿಕ್ ಸಮುದ್ರದ ಮೇಲೂ ಕೂದ ಸ್ಥಾಪಿತಗೊಂಡಿವೆ. ಝ್ಜ್ಹಹ್ಜ್ದ್ಫ್ ಒಇಉಜಿಲ್ಫ್ಜ ಲ್ಕ್ಸದ್ಜ್ಫ್ ಕ್ಲ್ದಜ್ಸ್ಫೋ ಹುನ್ಮ್ ಜೋ ಕಿ ಇಂಡಿಯಾ ಜಿ ಏಕ ಸತ್ ಫ್ಸಡ್ಸ್ದ್ಫ್ ಕ್ಧ್ಸಫುಯ್ತುಯ್ ಹ್ಯುಇಯ್ವೆರ್ ಜೌಒಇಉವೆಒಇಉರೌ ಇಔಒಇಉರ್ತುಒರ್ ತೌಇಔಇಔಒಇಎರ್ವ ೧೯೭೬ ರ ಮ್ಯಾಗ್ನುಸನ್-ಸ್ಟೀವನ್ಸ್ ಮೀನುಗಾರಿಕೆಗಳ ಸಂರಕ್ಷಣೆ ಮತ್ತು ನಿರ್ವಹಣಾ ಶಾಸನ == ಪ್ರದೇಶದ ಪ್ರಕಾರ ಶ್ರೇಣಿ ನೀಡುವಿಕೆ == ಈ ಯಾದಿಯು ಅವುಗಳ ಸಾರ್ವಭೌಮ ರಾಜ್ಯಗಳ (ವಾಸಸ್ಥಾನವಲ್ಲದ ಭೂಕ್ಷೇತ್ರಗಳನ್ನು ಒಳಗೊಂಡಂತೆ) ಅವಲಂಬಿತ ಭೂಕ್ಷೇತ್ರಗಳನ್ನು ಒಳಗೊಳ್ಳುತ್ತದೆ, ಆದರೆ ಅಂಟಾರ್ಟಿಕಾದ ಮೇಲಿನ ಹಕ್ಕುಕೇಳಿಕೆಗಳನ್ನು ಒಳಗೊಳ್ಳುವುದಿಲ್ಲ. ಇಇಜಡ್+ಟಿಎ ಇದು ಮೀಸಲು ಆರ್ಥಿಕ ವಲಯ ಜೊತೆಗೆ ಒಟ್ಟಾರೆ ಆಂತರಿಕ ಪ್ರದೇಶವಾಗಿದೆ. == ಇವನ್ನೂ ನೋಡಿ == ಟೆಂಪ್ಲೇಟು: ವಾಯು ರಕ್ಷಣಾ ಗುರುತಿಸುವಿಕೆಯ ವಲಯ ಎಲ್ಲೆಗೆರೆ ಭೂಖಂಡದ ಮರಳುದಂಡೆ ಅಂತರಾಷ್ಟ್ರೀಯ ಜಲಸಂಪನ್ಮೂಲಗಳು ಆರ್. ವಿ. ಮಾರ್ಷಲ್ ಭೂಗೋಳಿಕ ಜಲಸಂಪನ್ಮೂಲಗಳು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸಂಯುಕ್ತ ರಾಷ್ಟ್ರಗಳ ಸಮುದ್ರ ನಿಯಮದ ಮೇಲಿನ ಸಂಪ್ರದಾಯ - ಭಾಗ ಸೀ ಅರೌಂಡ್ ಅಸ್ ಪ್ರೊಜೆಕ್ಟ್ - ಎಲ್ಲ ರಾಷ್ಟ್ರಗಳ ಇಇಜಡ್‌ ಅನ್ನು ವೀಕ್ಷಿಸಿ 2011-03-22 ವೇಬ್ಯಾಕ್ ಮೆಷಿನ್ ನಲ್ಲಿ. (ಈ ಜಾಲತಾಣ ಭೂಗೋಳಿಕ ಜಲಸಂಪನ್ಮೂಲಗಳು ಹಾಗೂ ಇಇಜಡ್‌ ಮಧ್ಯೆ ಭೇದಿಸುವುದಿಲ್ಲ, ಮತ್ತು ಹೀಗೆ ಇಇಜಡ್‌ ಕ್ಷೇತ್ರಗಳನ್ನು ಅತಿಯಾಗಿ ಒತ್ತಿ ಹೇಳುವ ಪ್ರವೃತ್ತಿಯನ್ನು ಹೊಂದಿರುತ್ತದೆ). 1977 ರಿಂದ ಯುಎಸ್‌ಎ ವಲಯ 2003-01-12 ವೇಬ್ಯಾಕ್ ಮೆಷಿನ್ ನಲ್ಲಿ. ಜಿಐಎಸ್‌ ಡೆಟಾ: .